ಧರ್ಮದ ಹಾದಿಯಲ್ಲಿ ಸಾಕುವವನ ಹೃದಯ ನಿರ್ಮಲವಾಗಿರುತ್ತದೆ. ಆತನಲ್ಲಿ ಕರುಣೆ ಮತ್ತು ಕ್ಷಮಾ ಗುಣವಿರುತ್ತದೆ. ಮಾನವರು ಪರಸ್ಪರ ಪ್ರೀತಿಸುವಲ್ಲಿ ಧರ್ಮವಾಗಿರುತ್ತದೆ ಮತ್ತು ಅಂತಹ ಗುಣವು ಇತರರ ದುಃಖವನ್ನು ಕಳೆಯುತ್ತದೆ. ಇಂದಿನ ದಿನಗಳಲ್ಲಿ ಸರ್ವಧರ್ಮ ಸಮನ್ವಯ ಮತ್ತು ಸಮ್ಮೇಳನದ ತುರ್ತು ಇದ್ದೇ ಇದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ 89 ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರ ಧರ್ಮದ ನಿವಾಸವೇ ಆಗಿದೆ. ಮಾನವತೆಯ ಸ್ಥಾನವಾಗಿದೆ. ಈ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬೇಕೆಂಬ ನನ್ನ ಬಹುಕಾಲದ ಕನಸು ಇಂದು ಈಡೇರಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಅವರು, ದೇಹ, ಭೌತಿಕತೆ, ಇಂದ್ರಿಯ ಲೋಲುಪತೆಯನ್ನು ಮೀರಿದ್ದೇ ಧರ್ಮ. ಈ ಹೆಸರನ್ನಿಟ್ಟುಕೊಂಡು ಮತಪಂಥಗಳ ಹೊಂಡ ತೋಡಿ ಕೊಂಡರೆ ಅದು ಧರ್ಮ ವಾಗುವುದಿಲ್ಲ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಗಳನ್ನು ಸ್ವಾಗತಿಸಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಸನ್ಮಾನಿಸಿದರು.
ಪರಸ್ಪರ ಪ್ರೀತಿಯೇ ಮಾನವ ಧರ್ಮ.- ಗೆಹ್ಲೋಟ್
Date: