ಬಳ್ಳಾರಿಯಲ್ಲಿ ಒಂದು ದುರ್ಘಟನೆ. ಸಮಾಜದ ಸರ್ವತೋಮುಖ ಏಳಿಗೆಗೆ ಸರ್ಕಾರಿ ಅಧಿಕಾರಿಗಳದ್ದೂ ಕೊಡುಗೆ ಉಂಟು.
ಅಂತಹ ಸಂದರ್ಭಗಳಲ್ಲಿ ಅವರಿಗೆ ಜೀವನ್ಮರಣ ಸವಾಲಾಗುವ ಕ್ಷಣಗಳೂ ಸೃಷ್ಟಿಯಾಗುತ್ತವೆ.
ಇದಕ್ಕೆ ಸಾಕ್ಷಿ ಬಳ್ಳಾರಿಯಲ್ಲಿನ ಘಟನೆ. ಮರಳು, ಕಟ್ಟಡ ಸಾಮಾಗ್ರಿಗಳಲ್ಲಿ ಅತ್ಯಂತ ಅವಶ್ಯಕ. ಇಂತಹ ಮರಳನ್ನು ಅಕ್ರಮವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ.
ಸರ್ಕಾರಿ ತನ್ನ ಸಿಬ್ಬಂದಿಗಳ ಮೂಲಕ ಅಂತಹ ಕ್ರಮವನ್ನು ತಡೆಗಟ್ಟಲು ಸೂಕ್ತ ನಿಯಂತ್ರಿಸುತ್ತಿದೆ. ಆದರೆ ಕೆಲವೆಡೆ ಮರಳು ಅಕ್ರಮ ಸಾಗಣೆದಾರರ ಗುಂಪು ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡುತ್ತಿವೆ.
ಇದಕ್ಕೆ ಬಳ್ಳಾರಿಯ ಗ್ರಾಮಲೆಕ್ಕಿಗ ಶ್ರೀವೆಂಕಟಸ್ವಾಮಿಯವರೇ ಸಾಕ್ಷಿ. ದುಷ್ಕರ್ಮಿಗಳು ಅವರ ಮೇಲೆ ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಅವರ ಕುಟುಂಬ ವರ್ಗದವರ ಮೇಲೂ ದಾಳಿ ನಡೆಸಿದ್ದಾರೆ.
ಕಳೆದ ಮಂಗಳವಾರ ಮರಳು ಸಾಗಿಸುವ ಟ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಯಿತು.
ಬಳ್ಳಾರಿಯ ತೋಳಮಾಮಿಡಿ ಗ್ರಾಮದ ವೇದಾವತಿ ನದಿಯಿಂದ ಮರಳನ್ನು ತೆಗೆದು ಅಕ್ರಮ ಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳು ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಿ, ಟ್ರ್ಯಾಕ್ಟರ್ ವಶಪಡಿಸಿಕೊಂಡರು. ಮಾರನೆಯ ದಿನವೇ ದುಷ್ಕರ್ಮಿಗಳು ಶ್ರೀ ವೆಂಕಟೇಶ್ವರ ಅವರ ಮನೆಗೆ ನುಗ್ಗಿದರು. ಅಧಿಕಾರಿಯ ಪತ್ನಿ ಮತ್ತು ಮಗನ ಮೇಲೆ ರಾಡ್ ಗಳಿಂದ ಹೊಡೆದು ಹಲ್ಲೆ ನಡೆಸಿದರು. ಅಕ್ಕಪಕ್ಕದವರು ಕೂಡಲೇ ಬಂದು ಅವರನ್ನು ರಕ್ಷಿಸಿದ್ದಾರೆ. ಶ್ರೀ ವೆಂಕಟ ಸ್ವಾಮಿ ಮತ್ತು ಅವರ ಕುಟುಂಬದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮರಳು ಕಳ್ಳಸಾಗಣೆ ತಪ್ಪಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಮಲಪತ್ತಿ ಮಾಧ್ಯಮ ಕ್ಕೆ ತಿಳಿಸಿದ್ದಾರೆ.
ಬಳ್ಳಾರಿ : ಮರಳು ಮಾಫಿಯಾ
Date: