ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ರಾಜ್ಯದ ಎಲ್ಲಾ ವಿವಿಗಳ ತಮ್ಮ ಅಧೀನದಲ್ಲಿರುವ ಕಾಲೇಜುಗಳ ಪದವಿಯ ಮೊದಲ ವರ್ಷದಲ್ಲಿ ಕೌಶಲ್ಯಾಧಾರಿತ ಹೊಸ ಕೋರ್ಸ್ ಅಳವಡಿಸಿಕೊಂಡಿದೆ. ಆದರೆ ಅದನ್ನು ವಿದ್ಯಾರ್ಥಿಗಳಿಗೆ ಬೋಧಿಸುವವರೇ ಇಲ್ಲ. ಅವರ ನೇಮಕವೂ ಆಗಿಲ್ಲ. ಹೀಗಾಗಿ ಹೊಸ ಶಿಕ್ಷಣ ನೀತಿ ಜಾರಿ ಎಂಬುದು ಕೇವಲ ಮಾತಲ್ಲೇ ಉಳಿದಿದೆ.
ಈ ವಿಚಾರಗಳನ್ನು ಬೋಧಿಸಲು ಕಾಲೇಜುಗಳಲ್ಲಿ ಕೆಲಸದ ಒತ್ತಡ ಕಡಿಮೆ ಇರುವ ಉಪನ್ಯಾಸಕರ ಪಟ್ಟಿಯನ್ನು ಕೊಟ್ಟರೆ ನಾವು ಅವರಿಗೆ ತರಬೇತಿ ನೀಡುವ ಕಾರ್ಯ ಮಾಡಬಹುದು. ಉಪನ್ಯಾಸಕರ ಪಟ್ಟಿಯನ್ನು ಕಾಲೇಜುಗಳು ಕಳಿಸಿಕೊಡಲಿ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.
ರಾಜ್ಯದ 23 ವಿವಿಗಳಲ್ಲಿ ಎನ್ ಇಪಿ ಅಳವಡಿಸಲಾಗಿದೆ. ಆದರೆ ಕೌಶಲ ಪೂರಕ ಶಿಕ್ಷಣ ವಿಚಾರದಲ್ಲಿ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ, ಯೋಗ ಮತ್ತು ಆರೋಗ್ಯ ಎನ್ನುವ ಹೊಸ ಕೋರ್ಸ್ ಕಡ್ಡಾಯ ಮಾಡಲಾಗಿದೆ. ಇದರೊಂದಿಗೆ ಆರ್ಥಿಕ ಸಾಕ್ಷರತೆ, ಬ್ಯಾಂಕಿಂಗ್ ಮತ್ತು ಹಣಕಾಸು, ಬಿಲ್ಡಿಂಗ್ ಮ್ಯಾಥಮೆಟಿಕಲ್ ಎಬಿಲಿಟಿ, ಕೃತಿಕ ಬುದ್ಧಿಮತ್ತೆ ಸಮಸ್ಯೆಗಳ ಪರಿಹಾರ ಕೋರ್ಸ್, ಕ್ರಿಯಾಶೀಲತೆ ಮತ್ತು ಸಂಶೋಧನೆ ಕೋರ್ಸ್, ವಿಜ್ಞಾನ ಮತ್ತು ಸಮಾಜ, ಸಾಂಸ್ಕೃತಿಕ ಅರಿವು, ಸೈಬರ್ ಸೆಕ್ಯೂರಿಟಿ, ವೃತ್ತಿಪರ ಸಂವಹನ ಸೇರಿದಂತೆ ಹಲವು ಕೋರ್ಸ್ ಗಳು ಸೇರಿಕೊಂಡಿದೆ.
ಹೊಸ ಶಿಕ್ಷಣ ನೀತಿ ಅನುಸಾರ ಪಠ್ಯಗಳನ್ನು ಗೊತ್ತುಪಡಿಸಲಾಗಿದೆ. ಆದರೆ ಸಿಲಬಸ್ ಪ್ರತಿ ಸಿಗುತ್ತದೆಯೇ ಹೊರತು ಪುಸ್ತಕಗಳು ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸ ಶಿಕ್ಷಣ ನೀತಿ : ವಿಷಯವಿದೆ, ಬೋಧಕರಿಲ್ಲ
Date: