ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಹಲವಾರು ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ಮತ್ತು ಸೀಟು ಹಂಚಿಕೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದರ ಫಲಿತಾಂಶವನ್ನು ಪ್ರಕಟಿಸಿದೆ.
ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ‘ಚಾಯ್ಸ್’ ಆಯ್ಕೆ ಮಾಡಲು ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.
ವಾಯ್ಸ್ ನಲ್ಲಿ ಒಟ್ಟು ನಾಲ್ಕು ಆಯ್ಕೆಗಳನ್ನು ನೀಡಲಾಗಿರುತ್ತದೆ.
ಒಂದನೇ ಚಾಯ್ಸ್ ನಲ್ಲಿ ಪ್ರಥಮ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಸಂಪೂರ್ಣವಾಗಿ ಇಷ್ಟವಾಗಿದೆ. ಯಾವುದೇ ಬದಲಾವಣೆ ಅವಶ್ಯಕತೆ ಇಲ್ಲ. ಮುಂದಿನ ಸುತ್ತುಗಳಲ್ಲಿ ಯು ನೀಟ್ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಫಾರ್ ಸೈನ್ಸ್, ವೆಟರ್ನರಿ, ಹೀಗೆ ಹಲವಾರು ಕೋರ್ಸ್ ಗಳಿಗೆ ಭಾಗವಹಿಸಲು ಇಷ್ಟವಿರುವುದಿಲ್ಲ ಎಂಬುವುದು ಕಡ್ಡಾಯವಾಗಿ ನಮೂದಿಸಬೇಕು.
ಚಾಯ್ಸ್ ಎರಡರಲ್ಲಿ ಹಂಚಿಕೆಯಾದ ಸೀಟು ಇಷ್ಟವಾಗಿದ್ದರೂ, ಇನ್ನೂ ಉತ್ತಮ ಸೀಟನ್ನು ಪಡೆಯುವ ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದು. ಯುಜಿ ನೀಟ್ ವೈದ್ಯಕೀಯ, ವೈದ್ಯಕೀಯ ಕೋರ್ಸ್ ಗಳ ಸುತ್ತುಗಳಲ್ಲಿ ಭಾಗವಹಿಸಬಹುದು. ಎರಡನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಇಷ್ಟವಾದ ಸೀಟುಗಳು ಲಭ್ಯವಾಗದಿದ್ದಲ್ಲಿ, ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಉಳಿಯುತ್ತದೆ.
ಚಾಯ್ಸ್ ಮೂರರಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿ ಕೊಂಡು ಎಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್ ಗಳ ಪ್ರವೇಶಕ್ಕೆ ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.
ಚಾಯ್ಸ್ ನಾಲ್ಕರಲ್ಲಿ ಮೊದಲ ಸುತ್ತಿನಲ್ಲಿ ದೊರೆತಿರುವ ಸೀಟುಗಳು ತೃಪ್ತಿಕರವಾಗಿಲ್ಲ. ಯುಜಿಸಿಇಟಿ 2021ರ ಯಾವುದೇ ಸುತ್ತಿನ ಸೀಟುಗಳ ಹಂಚಿಕೆ ಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುವುದಿಲ್ಲ. ಯುಜಿ ನೀಟ್ ವೈದ್ಯಕೀಯ ಅಥವಾ ಯಾವುದೇ ಕೋರ್ಸ್ಗಳ ಸುತ್ತುಗಳಲ್ಲಿ ಭಾಗವಹಿಸುವ ಬಗ್ಗೆ ಅಭ್ಯರ್ಥಿಗಳು ಎಚ್ಚರಿಕೆಯಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಬೇಕು.
ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಚಾಯ್ಸ್ 1ರ ಅಭ್ಯರ್ಥಿಗಳಿಗೆ ಮಾತ್ರ ನವೆಂಬರ್ 30ರಿಂದ ಡಿಸೆಂಬರ್ 2 ರ ವರೆಗೆ ಅವಕಾಶ ನೀಡಲಾಗಿದೆ. ಈ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಡಿ. 3ರ ವರೆಗೆ ಸಮಯ ನೀಡಲಾಗಿದೆ.