ಕಸಾಪ ಅಧ್ಯಕ್ಷರನ್ನಾಗಿ ಮತದಾರರು ನನ್ನನ್ನು ಚುನಾಯಿಸಿದ್ದಾರೆ. ನನ್ನನ್ನು ಐದು ವರ್ಷಗಳ ಕಾಲ ಯಾರು ಅಲುಗಾಡಿಸವಾಗುವುದಿಲ್ಲ . ಬೇರೆ ಅಕಾಡೆಮಿ, ಸಂಸ್ಥೆಗಳಲ್ಲಾದರೆ ಸರಕಾರ ನೇಮಕ ಮಾಡುತ್ತದೆ. ಯಾವಾಗ ಬೇಕೋ ಆಗ ತೆಗೆಯುವ ಅಧಿಕಾರವು ಸರ್ಕಾರಕ್ಕೆ ಇರುತ್ತದೆ. ಆದರೆ ಕಸಾಪ ಅಧ್ಯಕ್ಷ ಸ್ಥಾನ ಅಂಥದಲ್ಲ ಎಂದು ಮಹೇಶ್ ಜೋಶಿ ತಿಳಿಸಿದರು.
ಕಸಾಪದ 26ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರು ಸಮಿತಿ ರಚಿಸಲಾಗುವುದು. ಕಸಾಪ ಆಡಳಿತ ಮಂಡಳಿಗೆ 1915 ರಲ್ಲಿ ನಿಯಮಾವಳಿಗಳನ್ನು ಜಾರಿಗೆ ತರಲಾಯಿತು. ತದನಂತರ ತಿದ್ದುಪಡಿ ಮಾಡಿಲ್ಲ. ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಹೀಗಾಗಿ ನಿಬಂಧನೆ ಅಥವಾ ನಿಯಮಗಳನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ ಎಂದರು.
ಪರಿಷತ್ತಿನ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲು ಬಿಡುವುದಿಲ್ಲ. ಅಂತಹ ಸಂಗತಿಗಳು ನನ್ನ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಂತವರ ಸದಸ್ಯತ್ವವನ್ನು ಮೂರು ವರ್ಷಗಳ ಕಾಲ ಅಮಾನತು ಮಾಡಲಾಗುವುದು ಜೋಶಿ ತಿಳಿಸಿದರು.
ಕಸಾಪಗೆ ದೊಡ್ಡ ಇತಿಹಾಸವಿದೆ. ಈ ಸಂಸ್ಥೆಗೆ ನನ್ನ ಪತಿ ಚುನಾಯಿತರಾಗಿರುವುದು ಖುಷಿಯ ವಿಚಾರ. ಅವರು ರಾಜ್ಯಕ್ಕೆ, ಭಾಷೆಗೆ ಪ್ರತಿನಿಧಿಯಾಗಿದ್ದಾರೆ. ಅವರದ್ದು ಹೋರಾಟದ ಮನೋಭಾವ. ಹೀಗಾಗಿ ಅವರನ್ನು ಸಮಾಜಕ್ಕೆ ಮುಡುಪಾಗಿಟ್ಟಿದ್ದೇವೆ. ಅದಕ್ಕೆ ನಮ್ಮ ಕುಟುಂಬದ ಎಲ್ಲರೂ ಸಹಕಾರ ನೀಡುತ್ತೇವೆ ಎಂದು ಮಹೇಶ್ ಜೋಶಿ ಅವರ ಪತ್ನಿ ಮಾಲತಿ ಜೋಶಿಯವರು ಹೇಳಿದ್ದಾರೆ.
ಕಸಾಪ ಅಧ್ಯಕ್ಷರಾಗಿ ಡಾ.ಮಹೇಶ್ ಜೋಶಿ ಪದಗ್ರಹಣ.
Date: