ಕೋವಿಡ್-19 ಸಾಂಕ್ರಾಮಿಕ ಮೂರನೆಯ ಅಲೆಯು ಹೆಚ್ಚು ಅಪಾಯಕಾರಿ ಆಗಿರುವುದಿಲ್ಲ ಎಂದು ತಜ್ಞ ವೈದ್ಯರು ಹಾಗೂ ವಿಜ್ಞಾನಿಗಳು ಇದುವರೆಗೆ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೊರೊನಾ ವೈರಾಣುವಿನ ರೂಪಾಂತರ ಜಗತ್ತಿನಾದ್ಯಂತ ತೀವ್ರವಾಗಿ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ.
ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ‘ಬಿ.1.1.529’ ರೂಪಾಂತರಿಯು ಈಗ ಇಸ್ರೇಲ್ ಮತ್ತು ಹಾಂಕಾಂಗ್ ಗೂ ವ್ಯಾಪಿಸಿರುವುದು ದೃಢಪಟ್ಟಿದೆ.
ಹೊಸ ಕೊರೊನಾ ರೂಪಾಂತರಿಯು ಆರ್ಭಟ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಪೆಡ್ರೋಸ್ ಅಧಾನೊಮ್ ಅವರು ತುರ್ತು ಸಭೆಯನ್ನು ಆಯೋಜಿಸಿದ್ದಾರೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್, ಇಸ್ರೇಲಿನಿಂದ ಹಿರಿಯ ವಿಜ್ಞಾನಿಗಳು ಹಾಗೂ ತಜ್ಞ ವೈದ್ಯರಿಂದ ಬೋಟ್ಸ್ ವಾನಾ ಪ್ರಸರಣದ ಬಗ್ಗೆ ವರದಿಯನ್ನು ಕೂಡ ವಿಆಸಂ (WHO) ಸಂಗ್ರಹಿಸಿದೆ. ಇದನ್ನು ಆಧರಿಸಿ, ಕೊರೊನಾ ರೂಪಾಂತರಿ ನಿಯಂತ್ರಣಕ್ಕೆ ಅಗತ್ಯ ರೂಪುರೇಷೆ ರಚಿಸಲು ಸಂಸ್ಥೆಯ ವಿಜ್ಞಾನಿಗಳೊಂದಿಗೆ ಪೆಡ್ರೋಸ್ ಮಹತ್ವದ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಯನ್ನು ವಿಶ್ವಸಂಸ್ಥೆಯು ಎಲ್ಲ ರಾಷ್ಟ್ರಗಳಿಗೆ ರವಾನಿಸಲಿದೆ.
ತಪಾಸಣೆಯಲ್ಲಿ ಗುರುತು ಹಿಡಿಯಲಾಗದ ಅಥವಾ ಇನ್ನೂ ಕೂಡ ಗಂಭೀರ ಸ್ಥಿತಿಗೆ ತಲುಪದ ಮಾರಣಾಂತಿಕ ಕಾಯಿಲೆಯು ಇರುವವರಿಗೆ ಹೊಸ ರೂಪಾಂತರಿಯು ಮಾರಣಾಂತಿಕವಾಗಿದೆ. ಉದಾಹರಣೆಗೆ ಎಡ್ಸ್ ಸೋಂಕು ತಗುಲಿರುವುದು ಗಮನಕ್ಕೆ ಬರದವರಿಗೆ ಬೋಟ್ಸ್ ವಾನಾ ಸೋಂಕು ತಗುಲಿದ್ದಲ್ಲಿ ಅನಾರೋಗ್ಯ ಮಿತಿಮೀರಲಿದೆ. ಡೆಲ್ಟಾ ರೂಪಾತರಿಯನ್ನು ಇದು ಹಿಮ್ಮೆಟ್ಟಿಸಲಿದೆ ಎಂದು ಲಂಡನ್ ವಿಶ್ವವಿದ್ಯಾಲಯದ ಜೀನ್ಸ್ ಅಧ್ಯಯನ ವಿಜ್ಞಾನಿ ಪ್ರೋ.ಫ್ರಾಂಕೊಯಿಸ್ ಬಲ್ಲೌಕ್ಸ್ ತಿಳಿಸಿದ್ದಾರೆ.
ವಿಸಾ ನಿರ್ಬಂಧ ಸಡಿಲಿಸಿ ಅಂತರಾಷ್ಟ್ರೀಯ ವಿಮಾನ ಸಂಚಾರ ಮುಕ್ತಗೊಳಿಸಲು ಮುಂದಾಗಿರುವ ವೇಳೆಯಲ್ಲೇ ಹೊಸ ರೂಪಾಂತರಿ ಬಗ್ಗೆ ಎಚ್ಚರಿಕೆ ಸಿಕ್ಕಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬೊಟ್ಸ್ ವಾನಾ ನಿಯಂತ್ರಣ ಬಗ್ಗೆ ಗಂಭೀರ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಿದ್ದೇವೆ. ಭಾರತದಲ್ಲಿ ರೂಪಾಂತರಿ ಪತ್ತೆಯಾಗಿಲ್ಲ. ಆದರೂ ರಾಜ್ಯಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಿಳಿಸಿದ್ದಾರೆ.
ಹೋದೆಯಾ ಕೊವಿಡ್ ಅಂದ್ರೆ ಬಂದೆನಾ ಒಮಿಕ್ರಾನ್
Date: