ಮೈಸೂರಿನ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ರಾಷ್ಟೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇತರೆ ಸಂಸ್ಥೆಗಳು ಸೇರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಿಎಫ್ ಟಿಆರ್ ಮಾಜಿ ನಿರ್ದೇಶಕ ಪ್ರಕಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
‘ ಜಡ ಜೀವನಶೈಲಿಯನ್ನು ಬದಲಾಯಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ನಮ್ಮ ಆರೋಗ್ಯವನ್ನು ರಕ್ಷಿಸಲು ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ಆಯುರ್ವೇದದಲ್ಲಿ 16 ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಇದನ್ನು ಅನುಸರಿಸಬೇಕು. ನಾವು ಆರೋಗ್ಯಕರ ಜೀವನ ನಡೆಸಲು ಉತ್ತಮ ಆಹಾರ ಮತ್ತು ಯೋಗ ಪ್ರಮುಖವಾಗಿದೆ ಎಂದು ಪ್ರಕಾಶ್ ಅವರು ಹೇಳಿದ್ದಾರೆ.