Thursday, October 3, 2024
Thursday, October 3, 2024

ಕರ್ನಾಟಕಕ್ಕೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ

Date:

ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ರಾಜ್ಯ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 2021 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ವಿಭಾಗದ ವಿವಿಧ ಪ್ರಶಸ್ತಿಗಳಿಗೆ ರಾಜ್ಯದ 9 ನಗರ ಸ್ಥಳೀಯ ಸಂಸ್ಥೆಗಳು ಆಯ್ಕೆಯಾಗಿವೆ.
ಅರಮನೆ ನಗರಿ ಮೈಸೂರು 2021ರ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಯಲ್ಲಿ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಮಗ್ರ ವಿಭಾಗದಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ.
ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ 2016ರಿಂದ ಸ್ವಚ್ಛ ಸರ್ವೇಕ್ಷಣಾ ಯೋಜನೆಯನ್ನು ನಡೆಸಿಕೊಂಡು ಬಂದಿದೆ. 2015, 2016 ರಲ್ಲಿ ಮೈಸೂರು ನಗರ ಸತತ ಎರಡು ಬಾರಿ ದೇಶದ ನಂಬರ್ ಒನ್ ಸ್ವಚ್ಛನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020 ರಲ್ಲಿ ಪ್ರಥಮ ಬಾರಿಗೆ ರಾಂಕಿಂಗ್ ಹಾಗೂ ಸ್ವಚ್ಛನಗರಿ ಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ರಾಷ್ಟ್ರದ 4,360 ಪಟ್ಟಣ ಮತ್ತು ನಗರಗಳ ಸ್ಥಳೀಯ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅವಲೋಕನ ಮತ್ತು ಸಮೀಕ್ಷೆ ನಡೆಸಿರುವ ಕೇಂದ್ರವು ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ಘೋಷಿಸಿದೆ.
ನೂರಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಿರುವ ರಾಜ್ಯಗಳ ಪೈಕಿ ಛತ್ತೀಸ್ ಘಡವು ಸ್ವಚ್ಛ ರಾಜ್ಯ ಪ್ರಶಸ್ತಿ ಪಡೆದಿದ್ದು, ರಾಜ್ಯಕ್ಕೆ 4ನೇ ಸ್ಥಾನ ದೊರೆತಿದೆ.
ಸ್ವಚ್ಛ ಸರ್ವೇಕ್ಷಣಾ ವಿಭಾಗದ ‘3 ಸ್ಟಾರ್’ ಪ್ರಶಸ್ತಿಗೆ ತುಮಕೂರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳು ಆಯ್ಕೆಯಾಗಿವೆ. ಹುಬ್ಬಳ್ಳಿ-ಧಾರವಾಡ ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ‘ಮಧ್ಯಮ’ ನಗರ ಪ್ರಶಸ್ತಿಗೂ ಪಾತ್ರವಾಗಿವೆ.
50 ಸಾವಿರದಿಂದ 1 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆಯು ಸ್ವಚ್ಛತೆಯೆಡೆಗೆ ತ್ವರಿತವಾಗಿ ಸಾಗುತ್ತಿರುವ ನಗರ ಪ್ರಶಸ್ತಿಗೆ, 25 ಸಾವಿರದಿಂದ 50 ಸಾವಿರ ಜನಸಂಖ್ಯೆಯ ವಿಭಾಗದಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ಉತ್ತಮ ಸುಸ್ಥಿರ ನಗರ ಪ್ರಶಸ್ತಿಗೆ ಆಯ್ಕೆಯಾಗಿದೆ. ಹೊಸದುರ್ಗ ಪುರಸಭೆಗೆ ದಕ್ಷಿಣ ವಲಯದ ಸ್ವಚ್ಛನಗರಿ ಪ್ರಶಸ್ತಿ, ಪಿರಿಯಾಪಟ್ಟಣ ಮತ್ತು ಕೆ.ಆರ್ .ನಗರ ಪುರಸಭೆಗಳು ಉತ್ತಮ ನಾಗರಿಕ ಸ್ಪಂದನೆ ವಿಭಾಗದ ಪ್ರಶಸ್ತಿ ಪಡೆದಿವೆ.
ಉತ್ತರಪ್ರದೇಶದ ವಾರಣಾಸಿ ನಗರವು ‘ಉತ್ತಮ ಗಂಗಾ ನಗರ’ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಬಿಹಾರದ ಮುಂಗೇರ್ ಮತ್ತು ಪಟ್ನಾ ನಗರಗಳು ಈ ವಿಭಾಗದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಮಧ್ಯಪ್ರದೇಶದ ಇಂದೋರ್ ನಗರವು ಸತತ 5ನೇ ವರ್ಷ ದೇಶದ ಸ್ವಚ್ಛ ನಗರ ಪ್ರಶಸ್ತಿಗೆ ಭಾಜನವಾಗಿದೆ. ಗುಜರಾತ್ ನ ಸೂರತ್ ಮತ್ತು ಆಂಧ್ರಪ್ರದೇಶದ ವಿಜಯವಾಡ, ಉತ್ತರಪ್ರದೇಶದ ಹಾಪುರ್ ಮತ್ತು ಗುಜರಾತ್ ನ ರಾಜ್ಕೋಟ್ ನಗರಗಳು ಕ್ರಮವಾಗಿ ಎರಡರಿಂದ 5ನೇ ಸ್ಥಾನ ಗಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...