Wednesday, October 2, 2024
Wednesday, October 2, 2024

ಟಿ-20 ಸರಣಿ : ಭಾರತದ ವಶ

Date:

ಟಿ – 20 ಕ್ರಿಕೆಟ್ ಟೂರ್ನಿಯ 2ನೇ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಿತು.
3 ಪಂದ್ಯಗಳ ಟಿ – 20 ಸರಣಿಯ ಹಣಾಹಣಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.
ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಮೊದಲಿಗೆ ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು. ಈ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 153 ರನ್ ಗಳಿಸಿತು.
ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ 31 ರನ್ ಗಳಿಸಿಕೊಂಡರು ಮತ್ತು ಡೇರಿಲ್ ಮಿಚೆಲ್ 28 ಎಸೆತಗಳಲ್ಲಿ 31 ರನ್ ಗಳಿಸಿಕೊಂಡರು ಆತಿಥೇಯ ಬೌಲರ್ ಗಳಿಗೆ ಬಿಸಿ ಮುಟ್ಟಿಸಿದರು. ಕೇವಲ 4 ಓವರ್ ಗಳಲ್ಲಿ 48 ರನ್ ಗಳುನ್ನು ಸೇರಿಸಿದರು. ಮಧ್ಯಮವೇಗಿ ದೀಪಕ್ ಚಾಹರ್ ಅವರು ಹಾಕಿದ ಎಸೆತ ಅನೀರಿಕ್ಷಿತವಾಗಿ ತುಸು ಎತ್ತರಕ್ಕೆ ಪುಟಿಯಿತು. ಗಪ್ಟಿಲ್ ತಳ್ಳಲು ಪ್ರಯತ್ನಿಸಿದರು. ಬ್ಯಾಟಿನ ಮೇಲ್ಭಾಗಕ್ಕೆ ಬಡಿದ ಚೆಂಡು ಚೆಂಗ್ಗನೆ ಮೇಲಕ್ಕೆ ಹಾರಿತು. ವಿಕೆಟ್ ಕೀಪರ್ ರಿಷಾಬ್ ಪಂತ್ ಚೆಂಡನ್ನು ಕ್ಯಾಚ್ ಇಡಿದರು.
ಮಾರ್ಕ್ ಚಾಪ್ ಮನ್ 17 ಎಸೆತಗಳಲ್ಲಿ 21 ರನ್ ಗಳಿಸಿ ಬಿರುಸಿನ ಆಟ ಆರಂಭಿಸಿದರು. ಆದರೆ ಒಂಭತ್ತನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ಶರಣಾದರು. 2 ಓವರ್ ಗಳ ನಂತರ ಡೆರಿಲ್ ಮಿಚೆಲ್ ಕೂಡ ಔಟಾದರು. ಅಂತರಾಷ್ಟ್ರೀಯ ಟಿ – 20 ಕ್ರಿಕೆಟ್ ನಲ್ಲಿ ಚೊಚ್ಚಲ ವಿಕೆಟ್ ಗಳಿಸಿದ ಹರ್ಷಲ್ ಸಂಭ್ರಮಿಸಿದರು.
ಈ ಹೊತ್ತಿನಲ್ಲಿ ಗ್ಲೆನ್ ಫಿಲಿಪ್ಸ್ ತಂಡಕ್ಕೆ ಅಸರೆಯಾದರು. 21 ಎಸೆತಗಳಲ್ಲಿ 34 ರನ್ ಗಳಿಸಿದರು. 3 ಸಿಕ್ಸರ್ ಸಿಡಿಸಿದ ಅವರು ತಂಡವನ್ನು ದೊಡ್ಡ ಮೊತ್ತದತ್ತ ಮುನ್ನಡೆಸುವ ಭರವಸೆ ಮೂಡಿಸಿದರು. ಅಷ್ಟರಲ್ಲಿಯೇ ಫಿಲಿಪ್ಸ್ ವಿಕೆಟ್ ಗಳಿಸಿ ಹರ್ಷಲ್ ಪಟೇಲ್ ಮಿಂಚಿದರು. ಆರಂಭದಲ್ಲಿ ಗಪ್ಟಿಲ್ ರಿಂದ ದಂಡನೆಗೊಳಗಾಗಿದ್ದ ಭುವನೇಶ್ವರ್ ಕುಮಾರ್ 18ನೇ ಓವರ್ ನಲ್ಲಿ ಜಿಮ್ಮಿ ನಿಷಾಮ್ ವಿಕೆಟ್ ಗಳಿಸುವಲ್ಲಿ ಸಫಲರಾದರು.
ಆದರೆ ಅಶ್ವಿನ್ ಶಿಸ್ತಿನ ದಾಳಿಯ ಮುಂದೆ ರನ್ ಗಳಿಗೆ ಸುಲಭವಾಗಿರಲಿಲ್ಲ. ಟಿಮ್ ಸೀಫರ್ಟ್ 15 ಎಸೆತಗಳಲ್ಲಿ 13 ರನ್ ಗಳಿಸಿದರು. ವಿಕೆಟ್ ಗಳಿಸಿದ ಅಶ್ವಿನ್ ಹೆಚ್ಚು ರನ್ ಬಿಟ್ಟುಕೊಡದೆ ದಾಂಡಿಗರನ್ನ ಕಾಡಿದರು.
154 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಆಡಿದ ಭಾರತ ತಂಡದ ರೋಹಿತ್ ಶರ್ಮಾ ಬಳಗ 16 ಎಸೆತ ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿತು.
ಆರಂಭಿಕ ಜೋಡಿ ಮೊದಲ ವಿಕೆಟ್ ಗೆ ರಾಹುಲ್ ಮತ್ತು ರೋಹಿತ್ 80 ಎಸೆತಗಳಲ್ಲಿ 117 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.ನಂತರ ಟಿಮ್ ಸೌಧಿ 3 ವಿಕೆಟ್ ಕಬಳಿಸಿದರು ರಿಷಬ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಜೊತೆಗೂಡಿ ಜಯದತ್ತ ಮುನ್ನುಗ್ಗಿದರು.
ಭರವಸೆ ಇರಿಸಿದಂತೆ ರಿಷಬ್ ಪಂತ್ ಸಿಕ್ಸರ್ ಸಿಡಿಸಿ ಗೆಲುವಿನ ಕಹಳೆ ಊದಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....