Thursday, February 5, 2026
Thursday, February 5, 2026

ಗಗನಕ್ಕೇರಿದ ತರಕಾರಿ ಬೆಲೆ

Date:

ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ ಅಪಾರ ಬೆಳೆ ನಷ್ಟ ಉಂಟಾದ ಪರಿಣಾಮ ಈಗ ತರಕಾರಿ ಬೆಲೆ ಗ್ರಾಹಕರ ಕೈಗೆ ನಿಟುಕಲಾಗದಷ್ಟು ದುಬಾರಿಯಾಗಿದೆ.

 ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಮಳೆಯಿಂದಾಗಿ ನೀರುಪಾಲಾಗಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದ ತರಕಾರಿ ಬೆಲೆಗಳು ದುಬಾರಿಯಾಗಿದ್ದು ಬಡ ಹಾಗೂ ಮಧ್ಯಮ ವರ್ಗದವರು ತರಕಾರಿ ಕೊಳ್ಳುವುದು ಕಷ್ಟವಾಗಿದೆ.

ಶಿವಮೊಗ್ಗದಲ್ಲಿ ವಾರದಿಂದೀಚೆಗೆ ಬಿಟ್ಟು ಬಿಡದೆ ವರುಣ ಆರ್ಭಟ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ತರಕಾರಿಗಳಾದ ಟೊಮೇಟೊ ಕೆಜಿಗೆ 70 ರೂಪಾಯಿ, ಬೀನ್ಸ್ ಕೆಜಿಗೆ 50.ರೂ , ಜವಳಿಕಾಯಿ ಕೆಜಿಗೆ 50.ರೂ, ಗೆಡ್ಡೆಕೋಸು 40.ರೂ ಹಾಗೂ ಈರುಳ್ಳಿ ಕೆಜಿಗೆ 40 ರಿಂದ 50 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಸೊಪ್ಪುಗಳು ಪ್ರತಿ ಕಟ್ಟಿಗೆ 10ರಿಂದ 20 ರೂಪಾಯಿ ಬೆಲೆ ಏರಿಕೆಯಾಗಿದೆ.

ಮಳೆಯನ ರಂಪಾಟ ಹೀಗೆ ಮುಂದುವರೆದರೆ ತರಕಾರಿಯ ಆವಕ ಕಡಿಮೆಯಾಗಿ ತರಕಾರಿ ಕ್ಷಾಮ ತಲೆದೋರಿತು ಎಂಬ ಆತಂಕ ಗ್ರಾಹಕರಲ್ಲಿ ಕಾಡುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...