Tuesday, November 26, 2024
Tuesday, November 26, 2024

ಟಿ-20 ಕಿವಿಸ್ ವಿರುದ್ಧ ಭಾರತಕ್ಕೆ ಜಯ

Date:

ಟಿ – 20 ಕ್ರಿಕೆಟ್ ಟೂರ್ನಿಯು ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ನಡುವೆ ಪಂದ್ಯ ನಡೆಯಿತು. ನ್ಯೂಜಿಲೆಂಡ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿತು.
ಜೈಪುರದ ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು ಎದುರಾಳಿ ತಂಡವು ಮೊದಲಿಗೆ ಬ್ಯಾಟಿಂಗ್ ಮಾಡಿ ಮೊದಲ ಹಂತದ ಜೊತೆಗೂಡಿದ ಗಪ್ಟಿಲ್ 42 ಎಸೆತಗಳಲ್ಲಿ 70 ರನ್ ಗಳಿಸಿಕೊಂಡರು ಮತ್ತು ಮಾರ್ಕ್ ಚಾಪ್ ಮನ್ 50 ಎಸೆತಗಳಲ್ಲಿ 63 ರನ್ ಗಳಿಸಿ ಅವರ ಶತಕದ ಜೊತೆಯಾಟದಿಂದಾಗಿ ಕೀವಿಸ್ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 164 ರನ್ ಗಳಿಸಿತು.
ಗಪ್ಟಿಲ್ ಮತ್ತು ಚಾಪ್ ಮನ್ ಶತಕದ ಜೊತೆಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 109 ರನ್ ಗಳನ್ನ ತಂಡಕ್ಕೆ ಸೇರಿಸಿದರು.
ಮೊದಲ ಓವರ್ ನಲ್ಲಿಯೇ ಡೆರಿಲ್ ಮಿಚೆಲ್ ಔಟಾದರು. ಇದರಿಂದಾಗಿ ತಂಡವು ಕುಸಿಯುವ ಆತಂಕವನ್ನ ಗಪ್ಟಿಲ್ ಮತ್ತು ಚಾಪ್ ಮನ್ ದೂರಮಾಡಿದರು. 14 ನೇ ಓವರ್ ನವರೆಗೂ ಇವರಿಬ್ಬರ ಇನ್ನಿಂಗ್ಸ್ ಗೆ ಸ್ಥಿರತೆ ಒದಗಿಸಿದ್ದರು ಆಫ್ ಸ್ಪಿನ್ನರ್ R.ಅಶ್ವಿನ್ ಎಸೆತದ ತಿರುವು ಗುರುತಿಸುವಲ್ಲಿ ಎಡವಿದ ಚಾಪ್ ಮನ್ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಜೊತೆಯಾಟ ಮುರಿದುಬಿತ್ತು. ಅದೇ ಓವರ್ ನಲ್ಲಿ ಅಶ್ವಿನ್ ಅವರು ಗ್ಲೆನ್ ಫಿಲಿಪ್ಸ್ ವಿಕೆಟ್ ಕೂಡ ಗಳಿಸಿದರು.
ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸಲು ನಮ್ಮ ಬೌಲರ್ ಗಳು ಪ್ರಯತ್ನಿಸಿದರು. ಆದರೂ ಗಪ್ಟಿಲ್ ಮತ್ತು ಟಿಮ್ ಸೀಫರ್ಟ್ 40 ರನ್ ಗಳನ್ನ ಸೇರಿಸಿದರು. ಮಧ್ಯಮ ವೇಗಿ ದೀಪಕ್ ಚಾಹಲ್ 18 ನೇ ಓವರ್ ನಲ್ಲಿ ಗಪ್ಟಿಲ್ ವಿಕೆಟ್ ಪಡೆಯುವುದರೊಂದಿಗೆ ಅಬ್ಬರದ ಆಟಕ್ಕೆ ತಡೆಯೊಡ್ಡಿದರು. ನಂತರದ ಓವರ್ ನಲ್ಲಿ ಭುವನೇಶ್ವರ್ ಎಸೆತದಲ್ಲಿ ಸೀಫರ್ಟ್ ಔಟಾದರು.
165 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಹೋರಾಡಿದ ಭಾರತ ತಂಡವು ಕೇವಲ 19.4 ಓವರ್ ಗಳಲ್ಲಿ 166 ರನ್ ಗಳಿಸಿ ಜಯ ಸಾಧಿಸಿತು. ರೋಹಿತ್ ಶರ್ಮಾ ನಾಯಕತ್ವದ ಮೊದಲ ಟಿ – 20 ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ದಾಖಲಿಸಿತು. K.L ರಾಹುಲ್ 14 ಎಸೆತಗಳಲ್ಲಿ 15 ರನ್ ಗಳಿಸಿ ಮತ್ತು ರೋಹಿತ್ 36 ಎಸೆತಗಳಲ್ಲಿ 48 ರನ್ ಗಳನ್ನ ಗಳಿಸಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು.
6 ನೇ ಓವರ್ ನಲ್ಲಿ ರಾಹುಲ್ ಔಟಾದಾಗ ಕ್ರೀಸ್ ಗೆ ಬಂದ ಸೂರ್ಯ ಕುಮಾರ್ ಯಾದವ್ ಇನ್ನಿಂಗ್ಸ್ ನ ರೂಪವನ್ನೇ ಬದಲಿಸಿದರು.
ಮುಂಬೈ ಜೋಡಿ ರೋಹಿತ್ ಮತ್ತು ಸೂರ್ಯ 2 ನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಸೂರ್ಯ 40 ಎಸೆತಗಳಲ್ಲಿ 60 ರನ್ ಗಳಿಸಿ ತಮ್ಮ ನಾಯಕನಿಗಿಂತಲೂ ಹೆಚ್ಚು ಬೀಸಾಟವಾಡಿದರು. 6 ಬೌಂಡರಿ ಹಾಗೂ ಅಮೋಘ 3 ಸಿಕ್ಸರ್ ಗಳನ್ನ ಸಿಡಿಸಿದರು. ಈ ಹಂತದಲ್ಲಿ ಜಯ ಸುಲಭವಾಗಿ ಒಲಿಯುವ ಆಶಾಭಾವ ಮೂಡಿತ್ತು.
ಶ್ರೇಯಸ್ ಅಯ್ಯರ್ 5 ರನ್ ಗಳಿಸಿ ಮತ್ತು ಪದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್ 2 ಎಸೆತದಲ್ಲಿ 4 ರನ್ ಗಳಿಸಿ ಬೇಗ ಔಟಾದರು. ಇನ್ನೊಂದೆಡೆ ಕಿವೀಸ್ ತಂಡದ ವೇಗಿ ಟೆಂಪ್ ಬೌಲ್ಟ್ 14 ನೇ ಓವರ್ ನಲ್ಲಿ ರೋಹಿತ್ ಮತ್ತು 17 ನೇ ಓವರ್ ನಲ್ಲಿ ಸೂರ್ಯಕುಮಾರ್ ವಿಕೆಟ್ ಗಳಿಸಿದರು. ಇದರಿಂದಾಗಿ ಭಾರತಕ್ಕೆ ಗೆಲುವು ಸುಲಭವಾಗಿ ಒಲಿಯುವುದು ತಪ್ಪಿತು.
ಕೊನೆಯ ಓವರ್ ನವರೆಗೂ ಕುತೂಹಲ ಮನೆ ಮಾಡಿತು ನ್ಯೂಜಿಲೆಂಡ್ ಬೌಲರ್ ಗಳು ತಮ್ಮ ಅನುಭವ ಪ್ರದರ್ಶಿಸಿ ಭಾರತ ಗೆಲುವಿನ ರನ್ ಗಾಗಿ ಪರದಾಡುವಂತೆ ಮಾಡಿದರು.ಜಾಣತನದಿಂದ ಪಟೇಲ್ 1 ರನ್ ಗಳಿಸಿ ರಿಷಬ್ ಪಂತ್ ಗೆ ಗೆಲುವಿನ ರನ್ ಹೊಡೆಯಲು ಅವಕಾಶ ಮಾಡಿಕೊಟ್ಟರು. ಪಂದ್ಯ ಬೆಳೆಸಿದ ರಿಷಬ್ ಪಂತ್ ಔಟಾಗದೆ 17 ರನ್ ಗಳಿಸಿ ಕೊನೆಯ 3 ಎಸೆತಗಳಲ್ಲಿ ತಂಡದ ಗೆಲುವಿಗೆ 3 ರನ್ ಗಳ ಅವಶ್ಯಕತೆ ಇತ್ತು . ಆಗ ಪಂತ್ ಬೌಂಡರಿ ಹೊಡೆಯುವ ಮೂಲಕ ಗೆಲುವಿನ ಕಾಣಿಕೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...