Wednesday, October 2, 2024
Wednesday, October 2, 2024

ಅಭಿನವ್ ಅಬ್ಬರ ಬ್ಯಾಟಿಂಗ್ : ಕರ್ನಾಟಕ ಕ್ಕೆ ಜಯ

Date:

ಸೈಯದ್ ಮುಸ್ತಾಕ್ ಅಲಿ ಟಿ – 20 ಟೂರ್ನಿಯು ಪಂದ್ಯ ಸೌರಾಷ್ಟ್ರ ಮತ್ತು ಕರ್ನಾಟಕ ತಂಡಗಳ ನಡುವೆ ನಡೆಯಿತು. ಸೌರಾಷ್ಟ್ರ ವಿರುದ್ಧ ಕರ್ನಾಟಕ ರೋಚಕ ಜಯ ಸಾಧಿಸಿತು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಾಗಿ ನಡೆಯಿತು. ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಡಿದ ಸೌರಾಷ್ಟ್ರ ತಂಡವು ಶೆಲ್ಡನ್ ಜಾಕ್ಸನ್ 43 ಎಸೆತಗಳಲ್ಲಿ 53 ರನ್ ಗಳಿಸಿ ಅರ್ಧಶತಕ ಭಾರಿಸಿದರು. ಇವರ ಅಬ್ಬರದ ಬ್ಯಾಟಿಂಗ್ ನಿಂದ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.
146 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಆಡಿದ ಕರ್ನಾಟಕ ಕೇವಲ 2 ಎಸೆತ ಉಳಿದಿದೆ ಎನ್ನುವಾಗ ಕ್ರೀಡಾಂಗಣದ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿಯುವಂತೆ ಮಾಡಿತು. ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿನವ್ ಅಂತಿಮ ಓವರ್ ನ 5 ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಹೊಡೆದರು. ಇದರಿಂದಾಗಿ 19 .5 ಓವರ್ ಗಳಲ್ಲಿಯೇ 8 ವಿಕೆಟ್ ಗಳಿಗೆ 150 ರನ್ ಬಾರಿಸಿ ರೋಚಕ ಜಯ ಸಾಧಿಸಿತು.
ಕರ್ನಾಟಕ ತಂಡ ರನ್ ಪಡೆಯುತ್ತಾ ಹೋದಂತೆ ಸೌರಾಷ್ಟ್ರ ದ ಅನುಭವಿ ಎಡಗೈ ಮದ್ಯಮವೇಗಿ ಜಯದೇವ್ ಉನದ್ಕಟ್ ಪೆಟ್ಟು ಕೊಟ್ಟರು. ಇದರಿಂದಾಗಿ ಕರ್ನಾಟಕ ಕೇವಲ 34 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಗಳನ್ನ ಕಳೆದುಕೊಂಡಿತು.
ಈ ಹಂತದಲ್ಲಿ ಒಂದೆಡೆ ವಿಕೆಟ್ ಗಳು ಪತನವಾಗುತ್ತಿದ್ದರೆ, 5 ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಭಿನವ್ ಮನೋಹರ್ ತಮ್ಮ ರನ್ ವೇಗಕ್ಕೆ ಕಡಿವಾಣ ಹಾಕಲಿಲ್ಲ. ದಿಟ್ಟತನದಿಂದ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 49 ಎಸೆತಗಳಲ್ಲಿ 70 ರನ್ ಗಳಿಸಿ ಸೌರಾಷ್ಟ್ರದ ಬೌಲರ್ಗಳನ್ನು ಹೌಹಾರಿದವರಂತೆ ಮಾಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್ ಅಲಿ ಟಿ – 20 ಕ್ರಿಕೆಟ್ ಟೂರ್ನಿಯ 8 ರ ಘಟ್ಟಕ್ಕೆ ಏರಿ ಮತ್ತು ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಕಾರಣರಾದರು.
ಸೌರಾಷ್ಟ್ರದ ಜಯದೇವ್ 4 ವಿಕೆಟ್ ಗಳಿಸಿದರು ಕೂಡ ತಂಡಕ್ಕೆ ಜಯದ ಕಾಣಿಕೆ ಸಾಧ್ಯವಾಗಲಿಲ್ಲ.
ಕರ್ನಾಟಕ ತಂಡದ ವಿ.ಕೌಶಿಕ್ . ವೈಶಾಖ್ ವಿಜಯ್ ಕುಮಾರ್. ಮತ್ತು ಕೆ.ಸಿ. ಕಾರ್ಯಪ್ಪ.ತಲಾ 2 ವಿಕೆಟ್ ಗಳಿಸಿದರು. ದೇವದತ್ತ ಪಡಿಕ್ಕಲ್. ಆರ್. ಸಮರ್ಥ್ ಮತ್ತು ಕೆ . ಗೌತಮ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಕರ್ನಾಟಕ ಕ್ವಾರ್ಟರ್ ಫೈನಲ್ ನಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...