Sunday, December 14, 2025
Sunday, December 14, 2025

ಪುನೀತರನ್ನ ಪರಿಪರಿಯಾಗಿ ನೆನೆದ ಜನಮನ

Date:

ಕನ್ನಡ ಚಲನಚಿತ್ರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ. ಉಸಿರು ಅಳಿದ ಬಳಿಕವು ಹೆಸರು ಉಳಿಸಿಕೊಳ್ಳುವ ವ್ಯಕ್ತಿಗಳು ಬಹಳ ಅಪರೂಪ ಪುನೀತ್ ಅವರ ವ್ಯಕ್ತಿತ್ವ ಅದಕ್ಕೊಂದು ಮಾದರಿ. ಪುನೀತ್ ರಾಜಕುಮಾರ್ ಅವರ ನಟನೆ ಹಾಗೂ ಸಾಮಾಜಿಕ ಸೇವೆಗೆ ಮರಣೋತ್ತರ ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ, ಸಿದ್ದಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರು ಭಾಜನರಾಗಿದ್ದಾರೆ. ಅಲ್ಲದೆ ರಾಜ್ಯದ ಸಾಮಾನ್ಯ ಜನರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರೂ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲೇಬೇಕೆಂದು ಒತ್ತಾಯ ಹೇರುತ್ತಿದ್ದಾರೆ. ಪುನೀತ್ ಅವರ ನಟನೆಯ ಸಾಧನೆಯ ಜೊತೆಗೆ ಸಮಾಜದ ಮೇಲೆ ಅವರಿಗಿದ್ದ ಕಳಕಳಿಯನ್ನು ನಮ್ಮ ಜನತೆ ಎಷ್ಟು ಮೆಚ್ಚಿದೆ ಎಂದು ಇದರಿಂದ ತಿಳಿಯುತ್ತದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಪುನೀತ್ ನಮನ” ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಲನಚಿತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಅಲ್ಲದೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿದ್ದದ್ದು ಒಂದುದು ವಿಶೇಷ.

ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಪುನೀತ್ ಅವರ ‘ಬೆಟ್ಟದ ಹೂವು’ ಚಿತ್ರದ ಅಮೋಘ ನಟನೆಗೆ ಕೇಂದ್ರ ಸರ್ಕಾರ ‘ಅತ್ಯುತ್ತಮ ಬಾಲ್ಯ ನಟ ಪ್ರಶಸ್ತಿ’ ನೀಡಿದೆ ಹಾಗೂ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಚಿತ್ರವೊಂದಕ್ಕೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ ಪ್ರಶಸ್ತಿ’ ನೀಡಿದ್ದನ್ನು ನೆನಪಿಸಿಕೊಂಡರು. ಡಾ.ರಾಜಕುಮಾರ್ ನಿಧನರಾದ ಸಮಯದಲ್ಲಿ ಯಾವ ರೀತಿಯಲ್ಲಿ ಜನ ತಮ್ಮ ದುಃಖ ಮತ್ತು ನಮನವನ್ನು ವ್ಯಕ್ತಪಡಿಸಿದ್ದರೋ, ಅದೇ ರೀತಿ ಪುನೀತ್ ನಿಧನದ ಸಂದರ್ಭದಲ್ಲಿ ಕೂಡ ಜನತೆ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುನೀತ್ ದೊಡ್ಡ ಹೆಜ್ಜೆ ಬಿಟ್ಟು ಹೋಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಮುಖ್ಯಮಂತ್ರಿಯವರು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಚಿತ್ರರಂಗಕ್ಕೆ ಬರುವವರಿಗೆ ಪುನೀತ್ ಹೆಸರಿನಲ್ಲಿ ಒಂದು ತರಬೇತಿ ಸಂಸ್ಥೆ ಅಥವಾ ಸ್ಟುಡಿಯೋ ಸ್ಥಾಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ದಕ್ಷಿಣ ಭಾರತದ ಚಲನಚಿತ್ರ ನಟ ಶರತ್ ಕುಮಾರ್ ಮಾತನಾಡಿ ಈ ನಾಡು ನನಗೆ ಯಾವಾಗಲೂ ಹತ್ತಿರ. ಪುನೀತ್ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ ಎಂದರು.
ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿ “ಹಿಂದೆ ಇಲ್ಲೇ ನಡೆದ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ನನ್ನ ಆಯಸ್ಸು ನಿನಗೆ ಕೊಡ್ತೀನಿ ಎಂದು ಪುನೀತ್ ಗೆ ಹೇಳಿದ್ದೆ…. ಇಲ್ಲ… ಆಗ್ತಾಯಿಲ್ಲ. ನನ್ನನ್ನು ಅಲ್ಲಿಗೆ ಕಳಿಸಿ, ಅವನನ್ನು ಇಲ್ಲಿಗೆ ಕರೆಸಿಕೊಳ್ಳಿ” ಎಂದು ಭಾವತೀವ್ರತೆಯಿಂದ ಮಾತನಾಡಿದರು. ಮುಂದೆ ಮಾತುಗಳೇ ಹೊರಡದೆ ದುಃಖತಪ್ತರಾದರು.

ಹಿರಿಯಣ್ಣ ನಟ ಶಿವರಾಜ್ ಕುಮಾರ್ ಮಾತನಾಡಿ “ಇಲ್ಲಿ ಮಾತನಾಡಲು ನನಗೆ ತುಂಬಾ ಕಷ್ಟ ಆಗ್ತುತ್ತಿದೆ. ನನ್ನ ತಮ್ಮ ಪುನೀತ್ ಬಗ್ಗೆ ಪದೇಪದೇ ಮಾತಾಡಿ ಮಾತಾಡಿ…. ಸಂದರ್ಶನಗಳಲ್ಲಿ ಹೊಗಳಿದ್ದು ಜಾಸ್ತಿ ಆಯ್ತೇನೋ? ಅವನಿಗೆ ನನ್ನ ದೃಷ್ಟಿಯೇ ಆಯ್ತಾ?” . ನನಗೆ ಚಿತ್ರರಂಗದಲ್ಲಿ ನಟನೆ ಆಸಕ್ತಿ ಇರಲಿಲ್ಲ ಸ್ಪೂರ್ತಿ ಕೊಟ್ಟವನೇ ಪುನೀತ್ ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತರು. ಈ ಸನ್ನಿವೇಶದಲ್ಲಿ ಕಣ್ಣೀರು ತರಿಸುವಂತಿತ್ತು.

ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಇಬ್ಬರು ಪುತ್ರಿಯರು ದುಃಖ ಸಾಗರದಲ್ಲಿ ಮುಳುಗಿದ್ದರು.

ಮುತ್ತುರಾಜ ಹೆತ್ತ ಮುತ್ತೆ ಎತ್ತ ಹೋದೆಯೋ.
ಅತ್ತು ಕರೆದರೂ ಮತ್ತೆ ಬಾರದಾದೆಯೋ….
ನಾಗೇಂದ್ರ ಪ್ರಸಾದ್ ರಚಿಸಿದ ಈ ಹಾಡು ಅಷ್ಟೇ ಆರ್ಥ ಧ್ವನಿಯಲ್ಲಿ ಮೂಡಿ ಬಂದಿತು. ಕೇಳಿದವರ ಎದೆಯಲ್ಲಿ ಪುನೀತರ ಅಗಲಿಕೆಯ ದುಃಖವನ್ನು ಭರಿಸಲು ಸಾಂತ್ವನ ಹೇಳುವಂತಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...