ಕೊರೊನಾ ನಂತರ ಹೊಸ ಸೋಂಕು?
ವಿ.ಆ. ಸಂ ಎಚ್ಚರಿಕೆ…
ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ಮತ್ತೊಂದು ವೈರಸ್ ಭಾರತಕ್ಕೆ ಪ್ರವೇಶಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕೊರೊನಾ ನಂತರ ಎ ಎಂ ಆರ್ ( ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ) ಎಂಬ ಸೋಂಕು ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದೆ. ಆದ್ದರಿಂದ ರಾಜ್ಯಗಳು ಎಎಂಆರ್ ವಿರುದ್ಧ ಹೋರಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿ.ಆ.ಸಂ ನಲ್ಲಿ ಭಾರತೀಯ ಅಧಿಕಾರಿಯಾಗಿರುವ ಡಾ. ಅನುಜ್ ಶರ್ಮಾ ಈ ಸಲಹೆಯನ್ನು ನೀಡಿದ್ದಾರೆ.
ಕೊರೊನಾದಂತೆ ಎ ಎಂ ಆರ್ ವೈರಸ್ ತಡೆಯಲು ಜನ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಮತ್ತು ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಗೆ ಕಡ್ಡಾಯವಾಗಿ ಕೊರೊನಾ ನಿರೋಧಕ ಲಸಿಕೆ ಪಡೆಯಬೇಕು ಎಂದು ಡಾ. ಅನುಜ್ ಶರ್ಮಾ ಎಚ್ಚರಿಸಿದ್ದಾರೆ.
ಈ ಹೊಸ ಸೋಂಕು (ಎಎಂಆರ್ ) ಬ್ಯಾಕ್ಟೀರಿಯ ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಎ.ಎಂ.ಆರ್ ಕಾಣಿಸಿಕೊಂಡರೆ ಆಂಟಿಬಯೋಟಿಕ್ ಸೇರಿದಂತೆ ಯಾವುದೇ ಮಾತ್ರೆ ,ಔಷಧಿಗಳು ಸಹ ಕೆಲಸ ಮಾಡುವುದಿಲ್ಲ. ಹೀಗಾಗಿ ಎಎಂಆರ್ ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಡಬ್ಲ್ಯೂ ಎಚ್ಒ ತಿಳಿಸಿದೆ.
ಕೊರೊನಾ
ಸೋಂಕಿತರಿಗೆ, ಅದರಲ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅತಿ ವೇಗವಾಗಿ ಎ ಎಂ ಆರ್ ತಗಲುವ ಸಾಧ್ಯತೆ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ(ಸಿಡಿಸಿ) ವೈದ್ಯರು ತಿಳಿಸಿದ್ದಾರೆ.
“ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ, ವೈದ್ಯರು ಅವರಿಗೆ ಅತಿಯಾದ ಆಂಟಿಬಯೋಟಿಕ್ಸ್ ನೀಡುವುದರಿಂದ ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರ ಜೊತೆಗೆ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ವ್ಯಕ್ತಿಯಿಂದ ಪರ್ಯಾಯ ವೈರಸ್ ಸೃಷ್ಟಿಯಾಗುತ್ತದೆ. ಈ ವೈರಾಣುವೇ ಎಎಂಆರ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿಸುತ್ತದೆ.