ದೆಹಲಿಯಲ್ಲಿ ವಾಯು ಮಾಲಿನ್ಯವು ಕೃಷಿ ತ್ಯಾಜ್ಯ ಸುಡುವಿಕೆ ಯಿಂದ ಶೇಕಡ 10 ಪ್ರಮಾಣದಷ್ಟಿದೆ ಎಂದು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ಹೇಳಿಕೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಅಸಮಧಾನ ವ್ಯಕ್ತಪಡಿಸಿದರು. ಶ್ರೀ ರಮಣ ಅವರ ನೇತೃತ್ವದ ನ್ಯಾಯಪೀಠವು ದೆಹಲಿ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಗಂಭೀರವಾಗಿದೆ ಎಂದು ತಿಳಿಸಿತು. ಇದಕ್ಕೆ ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ತುಷಾರ್ ಮೆಹ್ತಾ”ವೈಜ್ಞಾನಿಕ ವರದಿ ಪ್ರಕಾರ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಶೇ.4 ರಷ್ಟಿದೆ. ಬೇಸಿಗೆಯ ಕಾಲದಲ್ಲಿ ಇದು ಶೇ.7 ರಷ್ಟಿರುತ್ತದೆ. ರೈತರನ್ನು ದೂಷಿಸುವುದಕ್ಕಾಗಿಯೇ ದೆಹಲಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ತಿಳಿಸಿದರು.
ಯಾವುದೇ ಆಧಾರವಿಲ್ಲದೆ ಮಾತನಾಡಬೇಡಿ. ದಿಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ನಿಮ್ಮ ಬಳಿ ಯಾವ ವೈಜ್ಞಾನಿಕ ಆಧಾರವಿದೆ ಎನ್ನುವುದು ತಿಳಿಸಿ ಎಂದು ನ್ಯಾಯಪೀಠ ಕೇಳಿದೆ.
ದೆಹಲಿ ಮಾಲಿನ್ಯಕ್ಕೆ ವಾಹನಗಳ ಧೂಳು, ಉದ್ಯಮಗಳೇ ಕಾರಣ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನೀಡಿದೆ. ಆದರೆ ಗಾಳಿ ಗುಣಮಟ್ಟ ನಿರ್ವಹಣೆ ಸಮಿತಿಯು ಮಾಲಿನ್ಯದ ಪ್ರಮುಖ ಕಾರಣ ತಿಳಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವು ತುರ್ತು ಸಭೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.