ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರ ಸೇವಾವಧಿಯನ್ನ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ ಎರಡು ಸುಗ್ರಿವಾಜ್ಞೆಗಳಿಗೆ ರಾಷ್ಟ್ರಪತಿಯವರ ಅಂಕಿತವಷ್ಟೇ ಬಾಕಿ ಇದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕಗಳನ್ನು ಮಂಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಪ್ರತಿಪಕ್ಷಗಳನ್ನು ಬೆದರಿಸಲು ಮಾತ್ರವೇ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಪ್ರತಿಪಕ್ಷದ ಆರೋಪ ಮಾಡುತ್ತಿವೆ.
ಸದ್ಯ ಈ ಸಂಸ್ಥೆಗಳ ಮುಖ್ಯಸ್ಥರ ಅವಧಿ ಎರಡು ವರ್ಷ ಇದೆ. ಸಿಬಿಐ, ಇ.ಡಿ ನಿರ್ದೇಶಕರ ಸೇವಾವಧಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕರನ್ನು ಒಳಗೊಂಡ ವಿಶೇಷ ಸಮಿತಿಯ ಶಿಫಾರಸ್ಸಿನ ಅನ್ವಯ ಒಂದು ವರ್ಷ ವಿಸ್ತರಿಸಬಹುದು. ಸುಗ್ರಿವಾಜ್ಞೆ ಪ್ರಕಾರ, ಎರಡು ಸಂಸ್ಥೆಗಳ ನಿರ್ದೇಶಕರ ಸೇವಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.