ಇಂದಿನಿಂದ ರಾಜ್ಯಾದ್ಯಂತ ಟಾಮ್ ಅಂಡ್ ಜೆರ್ರಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.
‘ಟಾಮ್ ಅಂಡ್ ಜೆರ್ರಿ’ ಚಿತ್ರವು ಶೀರ್ಷಿಕೆಗೆ ತಕ್ಕಂತೆ ಕಿತ್ತಾಟ, ಗುದ್ದಾಟ ,ಮುದ್ದಾಟ ಅಂಶಗಳನ್ನು ಒಳಗೊಂಡಿದೆ.
ಗಂಟು ಮೂಟೆ ಚಿತ್ರದ ನಾಯಕರಾಗಿದ್ದ ನಿಶ್ಚಿತ್ ಕೊರೋಡಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಕಿರುತೆರೆ ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್ ನಾಯಕಿ ಪಾತ್ರವಹಿಸಿದ್ದಾರೆ.
ಚಿತ್ರದಲ್ಲಿ ಖಳನಾಯಕನಾಗಿ ಸೂರ್ಯ ಶೇಖರ್ ಮಿಂಚಿದ್ದಾರೆ. ಜೈ ಜಗದೀಶ್, ತಾರಾ ಅನುರಾಧ, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು ಹೀಗೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಯುವ ಪ್ರತಿಭೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಸಿನಿಮಾ ನಿರ್ಮಾಣವಾಗಿದೆ. ನಮ್ಮ ಬ್ಯಾನರ್ ನಿಂದ, ಮುಂದಿನ ದಿನಗಳಲ್ಲಿ ಹಲವು ಯುವಪ್ರತಿಭೆಗಳ ಸಿನಿಮಾಗಳು ನಿರ್ಮಾಣವಾಗಲಿದೆ ಎಂದು ಟಾಮ್ ಅಂಡ್ ಜೆರ್ರಿ ಚಿತ್ರದ ನಿರ್ಮಾಪಕರಾದ ರಾಜು ಶೇರಿಗಾರ್ ತಿಳಿಸಿದ್ದಾರೆ.
ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ಎಲ್ಲಾ ವಯಸ್ಸಿನವರು ಕುಳಿತು ನೋಡಬಹುದಾದ ಸಿನಿಮಾವಾಗಿದೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದೆ. ಅದರಲ್ಲಿ ‘ಹಾಯಾಗಿದೆ ಎದೆಯೊಳಗೆ’ ಎಂಬ ಹಾಡು ಜನರ ಮೆಚ್ಚುಗೆಯನ್ನು ಪಡೆದಿದೆ. ಛಾಯಾಗ್ರಹಣ ಸಂಕೇತ್ ಎಂ.ವೈ.ಎಸ್, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಅಣ್ಣ ಮಾಡಿದ್ದಾರೆ. ನೃತ್ಯ ಸಂಯೋಜನೆಯನ್ನು ರಾಜ್ ಕಿಶೋರ್ ಅವರು ನಿರ್ವಹಿಸಿದ್ದಾರೆ.
ಇಂದು ಟಾಮ್ ಅಂಡ್ ಜೆರ್ರಿ ಚಿತ್ರವು ತೆರೆಕಂಡಿದ್ದು, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ.