ಈಗಾಗಲೇ ಕರ್ನಾಟಕದ ಅಡಿಕೆ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅಡಿಕೆ ರೋಗಕಾರಕ ಪದಾರ್ಥ ಹೊಂದಿಲ್ಲ
ಎಂದು ಸಂಘಟಿತರಾಗಿ ಹೋರಟ ನಡೆಸುತ್ತಿದ್ದಾರೆ.ಆದರೆ ನಡುವೆ ಯಾರದ್ದಾದರೂ ಕೀಟಲೆಗಳು ಇದ್ದೇ ಇರುತ್ತವೆ.
ಅಡಕೆ ,ಉದ್ಯಮವಾಗಿ ಹೇಗೆ ಬೆಳೆಸಬಹುದು ಎಂದು ವಿಚಾರ ಸಂಕಿರಣಗಳು ನಡೆಯುತ್ತಿವೆ.ಇಂತಹ ಸನ್ನಿವೇಶದಲ್ಲಿ ಸಂಸದರೊಬ್ಬರು
ಅಡಕೆ ಕ್ಯಾನ್ಸರ್ ಕಾರಕ ಎಂದು ರಾಗ ಎಳೆಯುತ್ತಿದ್ದಾರೆ….
ಪ್ರಸಂಗ ಹೀಗಿದೆ.
ಮಾರಕ ಕ್ಯಾನ್ಸರ್ ರೋಗಕ್ಕೆ ಅಡಕೆ ಸೇವನೆ ಕಾರಣವಾಗಿದೆ. ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾನ್ಯ ಪ್ರಧಾನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿರುವೆ. ಪಾನ್ ಮಸಾಲದ ಪ್ರಮುಖ ಭಾಗವಾದ ಅಡಕೆ ಸೇವಿಸುವುದರಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗೆ ಜನರು ತುತ್ತಾಗಿ ತೊಂದರೆಗೊಳಗಾಗಿರುವುದನ್ನು ಸ್ವತಹ ನಾನೇ ನೋಡಿದ್ದೇನೆ. ಈ ಕಾರಣದಿಂದ ಮಾನವರ ಬಳಕೆಗೆ ಅಡಕೆಯನ್ನು ನಿಷೇಧಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಅಡಕೆ ಸೇವನೆಯಿಂದ ಅಸ್ತಮಾ ರೋಗ ಉಲ್ಬಣವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಜೊತೆಗೆ ಉಸಿರಾಟ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಕಾರಣಕ್ಕಾಗಿ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆ ನಿಷೇಧಿಸಿತ್ತು. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಿ ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಅಡಕೆ ಬಳಸಲು ಅನುಮತಿ ನೀಡಬೇಕೆಂದು ದುಬೆ ಅವರು ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ದೇಶದಾದ್ಯಂತ ಅಡಕೆ ಬಗ್ಗೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅದರಿಂದ ಟೀ ತಯಾರಿಸಿ ಭೇಷ್ ಅನಿಸಿಕೊಂಡಿರುವ
ನಿವೇದನ್ ನೆಂಪೆ ಅವರನ್ನ ಸಂಪರ್ಕಿಸಲು ಸಂಸದರಿಗೆ ಸೂಚಿಸಬೇಕಿದೆ. ನಮ್ಮ ಕರ್ನಾಟಕದ
ಅಡಕೆ ಪ್ರಾಧಿಕಾರದವರಾದರೂ ಆ ಪುಣ್ಯಾತ್ಮನಿಗೆ
ಮನವರಿಕೆಯಾಗುವ ರೀತಿ ತಿಳಿಸಬೇಕಿದೆ.