Wednesday, October 2, 2024
Wednesday, October 2, 2024

ಹರೆಕಳ ಹಾಜಬ್ಬ

Date:

ಅರವತ್ತೈದು ವರ್ಷದ ಮನುಷ್ಯ, ಮಂಗಳೂರು ತಾಲೂಕಿನ ಕೊಣಾಜೆ ಸನಿಹದ ಹರೇಕಳ‌ ಗ್ರಾಮದವರು. ಕಿತ್ತಳೆಹಣ್ಣು ಮಾರಾಟ ಅವರ ವೃತ್ತಿ. ಅವರ ಚಿಕ್ಕಂದಿನಲ್ಲಿ ಓದಲು ಶಾಲೆಯಿರಲಿಲ್ಲ. ಆ ವಂಚನೆ ಊರಿನ ಮಕ್ಕಳಿಗಾಗಬಾರದು ಎಂಬ ಯೋಚನೆ ಬಂತು. ಆಗಿನ್ನೂ ಬೀಡಿ ಕಟ್ಟುವ ಕೆಲಸವಿತ್ತು. ಹೊತ್ತಿನೂಟಕ್ಕೂ ಪರದಾಡುವಷ್ಟು ಬಡತನದ ಕುಟುಂಬ ಅವರದ್ದು. ಆದರೆ ಊರಿಗೊಂದು ಶಾಲೆ ಬೇಕು ಎಂಬ ದೃಢ ನಿಶ್ಚಯ ಮಾಡಿದರು.
ಕಿತ್ತಳೆ ಹಣ್ಣು ಮಾರುವದನ್ನ ಆರಂಭಿಸಿದರು. ಒಳಿತು ಮಾಡುವ
ಸೇವಾ ಸಂಕಲ್ಪಕ್ಕೆ ದೇವರೂ ಸಹಾಯಮಾಡುತ್ತಾನಂತೆ. ಅವರಿಗೆ ಮಾರಾಟದ ಹಣದಿಂದ ಶಾಲೆಯ ಕಟ್ಟಡ ಕಟ್ಟಲು ಶಕ್ತಿ ಬಂತು. ಸರ್ಕಾರಿ ಆಫೀಸುಗಳಿಗೆ ಅಲೆದಾಟ ಆರಂಭವಾಯಿತು. ಅವರ ಈ ತುಡಿತ, ಉತ್ಸಾಹ ನೋಡಿ ಜನಪ್ರತಿನಿಧಿಗಳು ಸಹಕಾರ ನೀಡಿದರು.
ಜಿಲ್ಲಾ ಪಂಚಾಯತಿ ಅನುಮತಿಯಿಂದ ಪ್ರಾಥಮಿಕ ಶಾಲೆ ಆರಂಭಮಾಡಿದರು.
ಸದ್ಯ ಸ್ವಂತ ಕಟ್ಟಡವಿಲ್ಲ. ಕೈಯಲ್ಲಿದ್ದದ್ದು ಕೇವಲ ಇಪ್ಪತೈದು ಸಾವಿರ ರೂ. ಧೃತಿಗೆಡಲಿಲ್ಲ. ಊರಿನ ಮದರಸಾದಲ್ಲೇ ತಾತ್ಕಾಲಿಕವಾಗಿ ಶಾಲೆ ಶುರುವಾಯಿತು.
ಶಾಶ್ವತ ನಿವೇಶನಕ್ಕಾಗಿ ಹುಡುಕಾಡಿದರು. ಸರ್ಕಾರದ ಜಾಗವೊಂದು ಯಾರಿಂದಲೋ ಅತಿಕ್ರಮಣವಾಗಿತ್ತು.
ಸಾರ್ವಜನಿಕರ ಗಮನ ಸೆಳೆದ ಅವರ ದಿಟ್ಟ ಹೆಜ್ಜೆಗಳಿಂದ ಎಲ್ಲರ ಬೆಂಬಲ ಸಿಕ್ಕಿತು.


ಅವರ ಹಣ್ಣು ಮಾರಾಟಕ್ಕೆ ಸಮಯವಿಲ್ಲದೇ ಬರಿಗೈ ಆಗುವ ಪರಿಸ್ಥಿತಿ ಬಂತು.
ಪತ್ರಿಕೆಯೊಂದು ಅವರ ಸಾಹಸ ಗುರುತಿಸಿ 2004 ರಲ್ಲಿ ಒಂದು ಲಕ್ಷ ರೂ. ಬಹುಮಾನ ನೀಡಿತು. ಸರಿ ಆ ಹಣವನ್ನೇ ತಮ್ಮ ಕಾರ್ಯಕ್ಕೆ ವಿನಿಯೋಗಿಸಿದರು.
ಅವರ ಪ್ರಯತ್ನ ಕ್ಕೆ ಸಿಕ್ಕ ಪ್ರತಿಫಲವಾಗಿ ಊರಿಗೆ ಪ್ರೌಢಶಾಲೆಯ ಭಾಗ್ಯ ದೊರಕಿತು.
ಇದು ಶ್ರೀ ಹಾಜಬ್ಬ ಅವರ ಸಾಹಸಗಾಥೆ. ಅವರು ಸಾಮಾನ್ಯ ಹಣ್ಣು ಮಾರಾಟಗಾರ ಆದರೆ ಅನನ್ಯ , ಅಪರೂಪದ ಸಮಾಜ ಸೇವಕ.
ಈಗ ಅವರನ್ನರಿಸಿ
ದೇಶದ ಪ್ರತಿಷ್ಠಿತ ಪದ್ಮ ಪುರಸ್ಕಾರ ಬಂದಿದೆ.
ಪುಟ್ಟ ಹಳ್ಳಿಯ ಸಣ್ಣ ಮನುಷ್ಯ,ಈಗ ದೇಶದ ಗಮನ ಸೆಳೆದಿದ್ದಾರೆ. ಪದ್ಮಶ್ರೀ ಅವರ ಕೊರಳನ್ನ ಅಲಂಕರಿಸಿದೆ.
ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರಿಂದ ಈ ಪುರಸ್ಕಾರ ಸ್ವೀಕರಿಸಿದ್ದಾರೆ.
ವೇದಿಕೆಗೆ ತೆರಳುವಾಗ ಪಾದರಕ್ಷೆ ಕಳಚಿ ಪಕ್ಕಕ್ಕಿರಿಸಿ ಬರಿಗಾಲಲ್ಲೇ ಹೆಜ್ಜೆಹಾಕಿದರು.
ಅಪ್ಪಟ ಹಳ್ಳಿಯ ಪ್ರಜೆಯ ಸರಳತೆ ಮತ್ತು ಮುಗ್ಧತೆ ಅಲ್ಲಿದ್ದವರನ್ನೆಲ್ಲ ಮೂಕ ವಿಸ್ಮಿತರನ್ನಾಗಿಸಿದೆ.
ಪದ್ಮಶ್ರೀ ಹಾಜಬ್ಬ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಇಲ್ಲಿಯವರೆಗೆ ಸಾರ್ವಜನಿಕರ ಸಹಕಾರದಿಂದ ಅಕ್ಷರ ಸಂತ ಎನಿಸಿದ ಶ್ರೀ ಹಾಜಬ್ಬ ಅವರ ಒಂದಿಷ್ಟು ಗುರಿಗಳು ಈಡೇರಿವೆ. ಇನ್ನು ಅವರ ಕನಸು ಪದವಿ ಪೂರ್ವ , ಪದವಿ ಶಿಕ್ಷಣ ಕಾಲೇಜನ್ನ ನಿರ್ಮಿಸುವುದಾಗಿದೆ. ಈಗ ರಾಜ್ಯ ಸರ್ಕಾರ ಪದ್ಮಶ್ರೀ ಪುರಸ್ಕೃತ ಶ್ರೀ ಹಾಜಬ್ಬ ಅವರೊಂದಿಗೆ ಹೆಜ್ಜೆ ಹಾಕಿ ಅವರ ಕನಸನ್ನ ನನಸು ಮಾಡಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...