ರಾಜ್ಯ ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳು, ನಿವೃತ್ತರು, ಅವಿವಾಹಿತರು ಹಾಗೂ ವಿಚ್ಛೇದಿತರನ್ನು ಹನಿಟ್ರ್ಯಾಪ್ ಜಾಲದ ಮೂಲಕ ಸುಲಿಗೆ ಮಾಡುತ್ತಿದ್ದ ಅಂತಹ ನಾಲ್ವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ರೀರಾಮಪುರದ ತ್ರಿಷಾ(26), ಆಕೆಯ ಪ್ರಿಯಕರ ಮುತ್ತು (32) , ಸಹಚರರಾದ ದಾಮೋದರ್ (30) ಮತ್ತು ಪೆದ್ದರೆಡ್ಡಿ (31) ಎಂದು ತಿಳಿದುಬಂದಿದೆ.
ರಾಜಾಜಿನಗರದ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಬಾರ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಈ ವಿಷಯ ತಿಳಿದ ಆರೋಪಿಗಳು ಪ್ಲಾನ್ ಮಾಡಿ ಬಳಿಕ ತ್ರಿಶಾ ಮೂಲಕ ಅಕ್ಟೋಬರ್ 1ರಂದು ಚಂದ್ರಶೇಖರ್ ಅವರಿಗೆ ಕರೆ ಮಾಡಿ “ಬಾರ್ ಲೈಸೆನ್ಸ್ ಕೊಡಿಸುತ್ತೇವೆ ಲಗ್ಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಬನ್ನಿ” ಎಂದು ತಿಳಿಸಿದ್ದಾಳೆ. ಚಂದ್ರಶೇಖರ್ ಯುವತಿ ತಿಳಿಸಿದ ಸ್ಥಳಕ್ಕೆ ತೆರಳಿದ್ದು ಆರೋಪಿಗಳು ತ್ರಿಷಾ ಮನೆಗೆ ಕರೆದಿದ್ದಾರೆ. ಇವತ್ತು ಜೊತೆ ಬಾರ್ ಲೈಸೆನ್ಸ್ ಬಗ್ಗೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದಂತೆಯೇ ಮುತ್ತು ಮತ್ತು ಆತನ ಸಹಚರರು ಏಕಾಏಕಿ ಮನೆಗೆ ನುಗ್ಗಿ ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿ ಮಾಧ್ಯಮ ಪ್ರತಿನಿಧಿಗಳನ್ನು ಕಳಿಸುವುದಾಗಿ ಬೆದರಿಕೆ ಹಾಕಿ 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದು ಹೇಳಿದಾಗ ಆರೋಪಿಗಳು ಮೂರು ಲಕ್ಷ ರೂಪಾಯಿಗೆ ಒತ್ತಾಯಿಸಿದ್ದಾರೆ. ಕೂಡಲಿ ಚಂದ್ರಶೇಖರ್ ಅವರು ತಮ್ಮ ಅಳಿಯನಿಗೆ ಕರೆ ಮಾಡಿ ತುರ್ತಾಗಿ 3 ಲಕ್ಷ ರೂಪಾಯಿ ತರಿಸಿ ಆರೋಪಿಗಳಿಗೆ ನೀಡಿದರು. ಈ ಸಂಬಂಧ ಚಂದ್ರಶೇಖರ್ ಅವರು ಕೂಡಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ನಗದು ಟು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.