Sunday, December 14, 2025
Sunday, December 14, 2025

ಭೇಷ್… ಜಗ್ಗೇಶ್…ಭೇಷ್!

Date:

ಕನ್ನಡದ ಚಿತ್ರರಂಗವೇಕೆ ಇಡೀ ಕನ್ನಡಿಗರೇ ಸ್ಥಂಭೀಭೂತ. ಯುವ ತಾರಾ ಕಣ್ಮಣಿ,ಪುನೀತ್ ಹಠಾತ್ ನಿಧನಕ್ಕೆ ಗಾಢ ದುಃಖಕ್ಕೆ ಜಾರಿದ್ದಾರೆ‌. ಸಾವು ಕಟ್ಟಿಟ್ಟ ಬುತ್ತಿ.ಅದರೆ ಇಡೀ ಕಲಾವಿದ ಗಣವೇ ಗರಬಡಿದಂತಾಗಿದೆ.!
ಎಲ್ಲರ ಮನದಲ್ಲೂ ಕಟ್ಟುಮಸ್ತಾದ ಹುಡುಗ,ಪುನೀತ್ ಸುಮ್ಮಸುಮ್ಮನೇ
ವಿಧಿವಶನಾದನಲ್ಲ!. ಪುನೀತರ ಸಾವಿನ ಬಗ್ಗೆ ಹಲವಾರು ಗಣ್ಯರು,ವೈದ್ಯರು
ತಮ್ಮದೇ ವಿಶ್ಲೇಷಣೆ ನೀಡುತ್ತಿದ್ದಾರೆ.

ಗಮನ ಸೆಳೆಯುವುದೆಂದರೆ ನಮ್ಮ ದೈಹಿಕ ಕಸರತ್ತು ಮಾಡುವ ಯುವಜನ. ಅವರೀಗ ಈಗ ಆಸ್ಪತ್ರೆಗೆ ಹೃದಯ ತಪಾಸಣೆಗೆ ನುಗ್ಗುತ್ತಿರುವುದು.!
ಈಗಾಗಲೇ ತಜ್ಞ ಡಾ.ಮಂಜುನಾಥ್ ಅವರು ಸ್ಯಾಚುರೇಟೆಡ್ ಎಣ್ಣೆ ಬಳಸದೇ
ಗಾಣೋತ್ಪನ್ನ ಎಣ್ಣೆಯನ್ನ ಆಹಾರದಲ್ಲಿ ಬಳಸಲು ಸೂಚಿಸಿದ್ದಾರೆ.

ಭವಿಷ್ಯದಲ್ಲಿ ಪ್ರಜ್ವಲ ತಾರೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪುನೀತ್
ಹೀಗೆ ಥಟ್ಟನೆ ಬಿಟ್ಟುಹೋಗಬಾರದಿತ್ತು.
ಈಗ ಅವರ ಸಾಮಾಜಿಕ ಸೇವಾಕಾರ್ಯಗಳು ಸಾರ್ವಜನಿಕರಿಗೆ ಗೊತ್ತಾಗುತ್ತಿವೆ. ಅವರ ಗೆಳೆಯ, ತಮಿಳು ಚಿತ್ರ ನಟ ವಿಶಾಲ್ ,ಮಿತ್ರ ಪುನೀತರ ಒಂದಿಷ್ಟು ಸೇವಾ ಹೊಣೆಯನ್ನ ಹೊತ್ತಿರುವುದು ಮಾದರಿಯಾಗಿದೆ.

ಈ ಸನ್ನಿವೇಶದಲ್ಲಿ ನವರಸನಾಯಕ ಜಗ್ಗೇಶ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ” ನಾವೆಲ್ಲರೂ ಶಾರದೆಯ ಮಕ್ಕಳು. ಚಿತ್ರರಂಗವೇ ನಮ್ಮ ಮನೆ.ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲು ಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೇ ಮುಂದುವರೆಯಲಿ ..ಲವ್ ಆಲ್..!”

ನಿಜಕ್ಕೂ ತಾರೆಯರು ಪರಸ್ಪರ ಮುನಿಸು ಮರೆಯಬೇಕು. ಚಿತ್ರರಂಗದಲ್ಲಿ ವ್ಯವಹಾರ ಕೇವಲ ಒಂದು ಮುಖ.ಅಷ್ಟೆ.! ಆದರೆ ಅದಕ್ಕೆ ಮಿತ್ರತ್ವ, ಬಂಧುತ್ವ,ಮಾನವೀಯತೆ ಎಂಬ ಹಿನ್ನೆಲೆಯೂ ಇದೆ. ಇಡೀ ಚಿತ್ರ ರಸಿಕರ ಅಭಿಮಾನವೇ ಎಲ್ಲರನ್ನ ಕಾಯುವ ಪ್ರಬಲ ಶಕ್ತಿ. ಇದನ್ನ ನಟ ಸಾರ್ವಭೌಮ ಡಾ.ರಾಜ್ ,ಆರಂಭದಿಂದಲೂ ಸಾಕ್ಷಾತ್ಕರಿಸಿಕೊಂಡು ಬಂದಿದ್ದಾರೆ. ಅವರನ್ನ ಮಾದರಿಯಾಗಿಸಿ ಮಿಕ್ಕ ತಾರಾವಳಿ ಮುನ್ನಡೆಯಬೇಕಿದೆ.ಅದೇ ಯುವರತ್ನ
ಪುನೀತ್ ಗೆ ನೀಡುವ ಶ್ರದ್ಧಾಂಜಲಿಯೂ ಹೌದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...