Saturday, December 6, 2025
Saturday, December 6, 2025

ಕಿಮ್ಮನೆ ರೆಸಾರ್ಟ್ ಗೆ ಪ್ರಶಸ್ತಿಯ ಗರಿ – Kimmane Golf Resort

Date:

ಶಿವಮೊಗ್ಗದ ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ಇರುವ ಕಿಮ್ಮನೆ ಗಾಲ್ಫ್ ರೆಸಾರ್ಟ್ ಸಂಸ್ಥೆಗೆ “ಬೆಸ್ಟ್ ಗಾಲ್ಫ್ ರೆಸಾರ್ಟ್ ಇನ್ ಏಷ್ಯಾ 2021” ಪ್ರಶಸ್ತಿ ನೀಡಲಾಗಿದೆ (Kimmane Golf Resort). ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಟರ್ ನ್ಯಾಷನಲ್ ಟ್ರಾವೆಲ್ ಸಂಸ್ಥೆಯು ಈ ಪುರಸ್ಕಾರ ಘೋಷಿಸಿದೆ. ಈ ರೆಸಾರ್ಟ್ ಸುಮಾರು 65 ಎಕ್ಕರೆ ಅಷ್ಟು ವಿಸ್ತಾರವಾಗಿದ್ದು. 9 ಹೋಲ್ ಗಾಲ್ಫ್ ಕೋರ್ಸ್, 30 ಐಶಾರಾಮಿ ಕೊಠಡಿಗಳು, ಬಾರ್, ರೆಸ್ಟೋರೆಂಟ್, ಒಳಾಂಗಣ ಔತಣಕೂಟ, ಸುಸಜ್ಜಿತ ಬೆಡ್ ರೂಂ, ಟೀ ಬಾರ್, ಟೇಬಲ್ ಟೆನ್ನಿಸ್, ಸ್ನೂಕರ್, ಫಿಟ್ನೆಸ್ ಸೆಂಟರ್, ಮೀನುಗಾರಿಕೆ ಸೌಲಭ್ಯಗಳನ್ನು ಒಳಗೊಂಡಿದೆ. ಗಾಲ್ಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕಿಮ್ಮನೆ ಜಯರಾಮ್ ಅವರ ಪ್ರಕಾರ ಈ ರೆಸಾರ್ಟ್ ಸ್ವಚ್ಛಂದ ಪರಿಸರದಿಂದಾಗಿ ವಿಶ್ವದರ್ಜೆಯ ಸೌಲಭ್ಯಗಳಿಂದ ಗಾಲ್ಫ್ ಪ್ರೀಯರ ಹಾಗೂ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಶಿವಮೊಗ್ಗದ ಸನಿಹವೇ ಇರುವ ನಿಸರ್ಗದ ತಾಣ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.

ಕಿಮ್ಮನೆ ಗಾಲ್ಫ್ ಮತ್ತು ವಿರಾಮ ಕ್ರೀಡೆಯ ವ್ಯವಹಾರಕ್ಕೆ ಶಿವಮೊಗ್ಗದ ಮೊದಲ ಪ್ರವೇಶವಾಗಿದೆ. ಪ್ರಪಂಚದ ಐಷಾರಾಮಿ ಗಾಲ್ಫ್ ರೆಸಾರ್ಟ್‌ಗಳಲ್ಲಿ ಮೋಜಿನ ಕಿರು ಕೋರ್ಸ್‌ಗಳ ಸಾಲಿನಲ್ಲಿ ವಿನ್ಯಾಸಗೊಳಿಸಲಾಗಿದೆ, ಕಿಮ್ಮನೆ ಗಾಲ್ಫ್ ರೆಸಾರ್ಟ್‌ಗೆ ಹೊಂದಿಕೊಂಡಿರುವ ಕಿಮ್ಮನೆ ಗಾಲ್ಫ್ ಟೆರೈನ್, 9-ಹೋಲ್, 3236-ಯಾರ್ಡ್ ಕೋರ್ಸ್, ಪಾರ್ 35 ಲೇಔಟ್ ಆಗಿದೆ. ಗಾಲ್ಫ್ ಕೋರ್ಸ್ ಸವಾಲಿನಷ್ಟೇ ಮೋಡಿ. ಗಾಲ್ಫ್ ಅನ್ನು ಯಾವಾಗಲೂ ಜನರನ್ನು ಸಂಪರ್ಕಿಸಲು ಮತ್ತು ಕುಟುಂಬಗಳನ್ನು ಒಟ್ಟುಗೂಡಿಸುವ ಸಾಧನವಾಗಿ ಗ್ರಹಿಸಲಾಗಿದೆ.

 Shimoga news

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...