ತಾಲೂಕು ಪಂಚಾಯಿತಿ, ವೀರಶೈವ ಲಿಂಗಾಯತ,ಹಾಗೂ ಪಂಚಮಸಾಲಿ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.

ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ದೀಪ ಬೆಳಗುವುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ” ಸ್ವಾತಂತ್ರ್ಯಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜಾರಮರ. ನಮ್ಮದೇ ನಾಡು, ನಮಗೆ ನಾವೇ ಸಾಮ್ರಾಟರು ಎಂದು, ಬ್ರಿಟಿಷರ ಆದೇಶವನ್ನು ಉಲ್ಲಂಘಿಸಿ ಅವರ ವಿರುದ್ಧ ಹೋರಾಡಿದವರು ರಾಣಿ ಚೆನ್ನಮ್ಮ. ಆಕೆಯ ದೇಶ ಪ್ರೇಮ, ಕರ್ತವ್ಯನಿಷ್ಠೆ, ಸಾಹಸಮಯವಾಗಿದೆ. ಜೀವನಕ್ಕೆ ಎಲ್ಲಾ ಕಾಲಕ್ಕೂ ಆದರ್ಶವಾಗಿದೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಕವಿರಾಜ್, ಸಿ.ಎಂ. ಸಿದ್ದೇಶ್, ಚಂದ್ರಪ್ಪ, ರುದ್ರಮುನಿ,ನೀಲಮ್ಮ,ರುದ್ರೇಶ್, ಮತ್ತಿತರರು ಉಪಸ್ಥಿತರಿದ್ದರು.