ಅಕಾಲಿಕ ಮಳೆಯಿಂದಾಗಿ ಬೆಳೆ ನಾಶ ಆಗಿರುವ ರೈತರಿಗೆ ದೆಹಲಿ ಸರ್ಕಾರವು ಪರಿಹಾರ ಘೋಷಣೆ ಮಾಡಿದೆ. ದೆಹಲಿ ಮುಖ್ಯಮಂತ್ರಿ ಶ್ರೀ ಅರವೀಂದ್ ಕೇಜ್ರಿವಾಲ್ ಅವರು ಪ್ರತಿ ಹೆಕ್ಟೇರ್ ಗೆ 50 ಸಾವಿರ ರೂಪಾಯಿಗಳ ಪರಿಹಾರ ಧನ ನೀಡುವುದಾಗಿ ತಿಳಿಸಿದ್ದಾರೆ.
ದೇಶದಲ್ಲಿಯೇ ಇದು ಅತ್ಯಂತ ಹೆಚ್ಚಿನ ಪರಿಹಾರವಾಗಿದೆ. ಇನ್ನಾ 2 ತಿಂಗಳಲ್ಲಿ ರೈತರಿಗೆ ಪರಿಹಾರ ತಲುಪಿಸಲಾಗುವುದು. ಬರುವ 15 ದಿನಗಳಲ್ಲಿ ಬೆಳೆ ನಾಶ ಸಮೀಕ್ಷೆ ಪೂರೈಸಲು ಅಧಿಕಾರಿಗಳಿಗೆ ಆದೇಶಿಸಿ, ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೃಷಿಕರ ತಂಡವು ತಮ್ಮನ್ನು ಬೇಟಿ ಮಾಡಿ ಅಕಾಲಿಕ ಮಳೆಯ ಪರಿಣಾಮವನ್ನು ಗಮನಕ್ಕೆ ತಂಡವು ತಂದಿದೆ. ಚಿಂತಿಸಬೇಡಿರಿ ಎಂದು ಧೈರ್ಯ ತುಂಬಿರುವುದಾಗಿ ಅರವೀಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ದೇಶದ ಇತರ ರಾಜ್ಯಗಳು ಕೇವಲ 8-10 ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದೆ. ತಾವು ನೀಡಿದ ಈ ಪರಿಹಾರದ ಮೊತ್ತವು ಅತ್ಯಂತ ಅಧಿಕ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಿಜೆಪಿ ಪಕ್ಷವು ಪರಿಹಾರ ಮೊತ್ತ ಕಡಿಮೆಯಾಗಿದೆ ಅದನ್ನು ಪ್ರತಿ ಹೆಕ್ಟೇರ್ ಗಿಂತ ಪ್ರತಿ ಎಕರೆಗೆ ಹೆಚ್ಚಿಸಬೇಕು ಹಾಗೂ ಡಿಸೈಲ್, ವಿದ್ಯುತ್, ಕೃಷಿ ಉಪಕರಣಗಳ ಖರೀದಿಯಲ್ಲಿ ರೈತರಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯ ಮಾಡಿದೆ.